ನೀಲಾಂಜನಸಮಾಭಾಸಂ ರವಿಪುತ್ರಂ ಯಮಾನುಜಮ್| ಛಾಯಾಮಾರ್ತಾಂಡಸಂಭೂತಂ ತಂ ನಮಾಮಿ ಶನೈಶ್ಚರಮ್||

ಶ್ರೀಸೂರ್ಯದೇವರ ಮತ್ತು ಛಾಯಾದೇವಿಯರ ಮಗನಾಗಿ ಯಮಧರ್ಮದೇವರಿಗೆ ತಮ್ಮನಾಗಿ ಕಡುಗಪ್ಪು ಬಣ್ಣದ ಶರೀರದಿಂದ ಕೂಡಿರುವ

ಶ್ರೀ ಶನೈಶ್ಚರರನ್ನು ನಮಸ್ಕರಿಸುತ್ತೇನೆ.

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ| ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ||

ಸತ್ಯದ ಸ್ಥಾಪನೆಯಲ್ಲಿ ಹಾಗೂ ಧರ್ಮದಪ್ರಸಾರದಲ್ಲಿ ರತರಾಗಿರುವ, ಅತ್ಯಂತ ಪೂಜ್ಯರಾದ, ಸೇವಿಸುವವರಿಗೆ ಕಲ್ಪವೃಕ್ಷದಂತೆ ನಮಿಸುವವರಿಗೆ ಕಾಮಧೇನುವಿನಂತೆ ಇರುವ ಶ್ರೀ ರಾಘವೇಂದ್ರತೀರ್ಥರಿಗೆ ಅನಂತ ದಂಡ ಪ್ರಣಾಮಗಳು.

ಶ್ರೀ ರಾಘವೇಂದ್ರ ಸ್ತೋತ್ರದ ಪಠಣೆಯ ಫಲ- ಶ್ಲೋಕ ಸಂಖ್ಯೆ ಮತ್ತು ಅದರ ಫಲ

1) ವಾಕ್ಸಿದ್ದಿ ಗಾಗಿ ರಾಯರ ಸ್ತೊತ್ರದ ಪಠಣೆ

2) ದುರ್ವಾದಿ ನಿಗ್ರಹ ಕ್ಕಾಗಿ ರಾಯರ ಸ್ತೋತ್ರದ ಪಠಣೆ

3)ಪಾಪ ಪರಿಹಾರಕ್ಕಾಗಿ ಪ್ರಾರ್ಥನೆ

4)ಇಷ್ಟಸಿದ್ದಿಗಾಗಿ ಪ್ರಾರ್ಥನೆ

5)ದು:ಖ ನಿವಾರಣೆಗಾಗಿ ಪ್ರಾರ್ಥನೆ

6)ನಮ್ಮ ಶತ್ರುಗಳ ವಾಕ್ ಬಂಧನ

7)ಸಕಲ ರೋಗಗಳ ಪರಿಹಾರ

8)ಪುತ್ರ ಪ್ರಾಪ್ತಿ ಹಾಗೂತಾಪತ್ರಯ ಪರಿಹಾರ

9)ರಾಯರ ಭಕ್ತರ ದರ್ಶನ ದಿಂದ ದುರಿತ/ಪಾಪ ನಿವಾರಣೆ

10)ಸರ್ವ ಶಾಸ್ತ್ರಗಳ ಸಿದ್ದಿ

11)ಸಂಪತ್ತು ಹಾಗೂ ಆಯುಷ್ಯ ಅಭಿವೃದ್ಧಿ

12)ಪ್ರತಿವಾದಿಗಳ ಮೇಲೆ ಜಯ ಸಿದ್ದಿ

13) ಅಪರೋಕ್ಷ ಜ್ಞಾನ ಸಿದ್ದಿ

14)ವೈರಾಗ್ಯ, ವಾಕ್ಪಟುತ್ವ ಸಿದ್ದಿ

15)ಎಲ್ಲಾ ರೋಗ ರುಜಿನಗಳ ನಾಶ

16)ಸರ್ವ ಸಿದ್ದಿಗೆ ರಾಯರ ಅಷ್ಟಾಕ್ಷರ ಮಂತ್ರ ಜಪ

17)ರಾಯರಲ್ಲಿ ಚತುರ್ವಿಧ ಪುರುಷಾರ್ಥಗಳ ಪ್ರಾಪ್ತಿಗೆ ಪ್ರಾರ್ಥನೆ

18)ಇಹ ಪರಲೋಕಗಳಲ್ಲಿ ಸುಖ ಸಮೃದ್ದಿ

19)ಆತ್ಮ ಸಂರಕ್ಷಣೆ

20)ರಾಯರ ಬೃಂದಾವನ ಪ್ರದಕ್ಷಿಣೆ, ಪಾದೋದಕದ ಮಹಿಮೆ

21)ನಮಸ್ಕಾರ ಹಾಗೂ ಸಂಕೀರ್ತನೆ ಮಹಿಮೆ

22)ಗುರುರಾಜರಲ್ಲಿ ಘೋರ ಸಂಸಾರ ದು:ಖ ಪರಿಹಾರಕ್ಕಾಗೆ ಪ್ರಾರ್ಥನೆ

23) ಭಕ್ತಿಯಿಂದ ಪಠಿಸಿದರೆ ಯಾವುದೇ ರೋಗದ ಪರಿಹಾರ

24)ಅಂಧತ್ವ ಮೂಕತ್ವ ಪೂರ್ಣಾಯುಷ್ಯ ಕ್ಕಾಗಿ ಪ್ರಾರ್ಥನೆ

25)ಉದರ ದೋಷ ನಾಶ

26)ದಿವ್ಯಾಂಗರಿಗೆ ನಡೆಯುವ ಶಕ್ತಿ ಬರುತ್ತದೆ

27)ಭೂತ, ಪ್ರೇತ, ಪಿಶಾಚಾದಿ ಪೀಡಾ ಪರಿಹಾರ

28)ದೀಪ ಬೆಳಗುವುದರಿಂದ ತತ್ವಜ್ಞಾನ ,ಪುತ್ರ ಸಂತತಿ

29)ಸರ್ವಾಭಿಷ್ಟಗಳ ಸಿದ್ದಿ

30)ಕಳ್ಳ ಕಾಕರ ಭಯ ಪರಿಹಾರಕ್ಕಾಗಿ

31)ಗುರುಸ್ತೋತ್ರದಿಂದ ಲಭಿಸುವ ಫಲಗಳಿಗೆ ಹಯಗ್ರೀವರೇ ಸಾಕ್ಷಿ

32)ಇದು ಗುರುರಾಜರ ಅನುಗ್ರಹದಿಂದ ಶ್ರೀ ಅಪ್ಪಣ್ಣಾಚಾರ್ಯರಿಂದ ರಚಿಸಲ್ಪಟ್ಟಿದೆ