1. ದೇವರ ಬಗೆಗಿನ ನಂಬಿಕೆ ಅನಾದಿಕಾಲದಿಂದಲೂ ಮನುಷ್ಯನಲ್ಲಿ ಮೂಡಿಬಂದಿದೆ.

2. ಇಡೀ ಜಗತ್ತು ದೇವರ ಸೃಷ್ಟಿ ಎಂಬ ಪ್ರತಿಪಾದನೆ ಕೆಲವರದಾದರೆ, ಮಾನವನ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ದೇವರೆಂಬ ನಂಬಿಕೆಯನ್ನು ಮನುಷ್ಯನೇ ಹುಟ್ಟು ಹಾಕಿದ್ದಾನೆಂದು ಕೆಲವರ ಅಭಿಪ್ರಾಯ.

3. ದೇವರ ಬಗ್ಗೆ ನಂಬಿಕೆ ಉಳ್ಳವರನ್ನು ಆಸ್ತಿಕರು ಎಂದು ಕರೆಯುತ್ತಾರೆ.

4. ದೇವರನ್ನು ನಂಬದವರು ನಾಸ್ತಿಕರು.

5. ದೇವರು ಅವರವರ ಮತ, ಆಚಾರ, ವಿಚಾರಗಳ ಅಡಿಯಲ್ಲಿ ಒಬ್ಬನೇ ಆಗಿರಬಹುದು ಅಥವಾ ಹಲವು ದೇವರ ಆರಾಧನೆಯನ್ನೂ ಮಾಡುವ ಪದ್ಧತಿ ಹೊಂದಿರಬಹುದು.

6. ಹಾಗೆಯೇ ದೇವರಿಗೆ ವಿವಿಧ ರೀತಿಯ ಆಕಾರಗಳನ್ನು ನೀಡಿ ಪೂಜಿಸುವ ಸಂಸ್ಕೃತಿ ಕೆಲವರದಾದರೆ, ಮತ್ತೆ ಕೆಲವು ಪದ್ಧತಿಗಳಲ್ಲಿ ದೇವರಿಗೆ ಯಾವುದೇ ಆಕಾರವಿರುವುದಿಲ್ಲ.

7. ದೇವರಿಗೆ ಆಕಾರ, ಬಣ್ಣ, ರೂಪಗಳನ್ನು ನೀಡಿ ವಿಗ್ರಹಗಳಿಗೆ ಆವಾಹಿಸಿ ಪೂಜಿಸುವ ಪದ್ಧತಿಯನ್ನು ವಿಗ್ರಹಾರಾಧನೆ ಎಂದು ಕರೆಯುತ್ತಾರೆ.

8. ದೇವನೊಬ್ಬ ನಾಮ ಹಲವು ಎಂದು ನಂಬಿ ಹಲವಾರು ರೂಪಗಳಲ್ಲಿ ದೇವರನ್ನು ಪೂಜಿಸಿಕೊಂಡು ಬರುತ್ತಿರುವ ಸಂಸ್ಕೃತಿ ನಮ್ಮ ಸನಾತನ ಹಿಂದೂ ಧರ್ಮದಲ್ಲಿದೆ.

9. ಹಲವರಿಗೆ ಬಂಧುವಾಗಿ, ತಾಯಿಯಾಗಿ, ಸಖನಾಗಿ, ಮಗುವಾಗಿ, ದಾರಿ ತೋರುವ ಗುರುವಾಗಿ ದೇವರು ಕಂಡುಬರುತ್ತಾನೆ.

10. ದೇವರನ್ನೇ ತಾಯಿಯಾಗಿ, ಜಗತ್ತಿನ ಸೃಷ್ಟಿಗೆ ಕಾರಣಳಾದ ಆದಿಪರಾಶಕ್ತಿಯಾಗಿ ಪೂಜಿಸುವ ಮಾರ್ಗವನ್ನು ಶಾಕ್ತಪಂಥದವರು ಪಾಲಿಸುತ್ತಾರೆ.

11. ಶಿವನನ್ನು ಪೂಜಿಸುವವರು ಶೈವರು.

12. ವಿಷ್ಣುವನ್ನು ನಂಬಿ ಅವನೇ ಸರ್ವಶ್ರೇಷ್ಠ ಎಂದು ಪ್ರತಿಪಾದಿಸುವವರನ್ನು ವೈಷ್ಣವರು ಎಂದು ಕರೆಯಲಾಗುತ್ತದೆ.

13. "ಏಕಂ ಸತ್ ವಿಪ್ರಾಃ ಬಹುಧಾ ವದಂತಿ" ಎಂಬಂತೆ ಯಾವುದೇ ಪೂಜಾ ಪದ್ಧತಿ ಇರಲಿ ಅದು ಸರ್ವಶಕ್ತನಾದ ಭಗವಂತನ ಆರಾಧನೆಯೇ ಆಗಿರುತ್ತದೆ.

14. "ಸರ್ವ ದೇವ ನಮಸ್ಕಾರಾಃ ಕೇಶವಂ ಪ್ರತಿಗಚ್ಛತಿ" ಎಂಬ ಸಂಸ್ಕೃತ ಸುಭಾಷಿತದಂತೆ ನಮ್ಮ ನಮ್ಮ ನಂಬಿಕೆ ಯಾವುದೇ ಆಗಿದ್ದರೂ ನಾವು ಮಾಡುವ ಪೂಜೆಯ ಉದ್ದೇಶ ಕೊನೆಯಲ್ಲಿ ಭಗವಂತನಿಗೆ ಮಾಡುವ ಸಮರ್ಪಣೆಯೇ ಆಗಿರುತ್ತದೆ ಎಂಬುದು ಸರ್ವವಿದಿತ.

15. ಈ ಹಿನ್ನಲೆಯಲ್ಲಿ "ಶಿವ ದೊಡ್ಡವ, ಕೇಶವನು ಉತ್ತಮ" ಎಂದು ನಮ್ಮನಮ್ಮಲ್ಲೇ ಭೇದ ಭಾವ ಮಾಡುವುದರಿಂದ ಕೇವಲ ನಮ್ಮ ನಮ್ಮ ಪಾಂಡಿತ್ಯ ಪ್ರದರ್ಶನವಾಗುತ್ತದೆಯೇ ಹೊರತು ಇನ್ನಾವ ಸಾಧನೆಯೂ ಸಾಧ್ಯವಾಗುವುದಿಲ್ಲ.

16. ದೇವರ ಮೇಲಿನ ನಂಬಿಕೆ, ಆಚರಣೆಗಳು ನಮ್ಮಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವಲ್ಲಿ, ಆದರ್ಶ ಜೀವನವನ್ನು ನಡೆಸುವಲ್ಲಿ ಸಹಾಯ ಮಾಡಬೇಕೇ ಹೊರತು, ಅದರಿಂದ ತನಗೆ, ಇತರರಿಗೆ ಯಾವುದೇ ರೀತಿಯ ತೊಂದರೆ ಆಗುತ್ತಿದ್ದಲ್ಲಿ ಅಥವಾ ಹಿಂಸೆ ಆಗುತ್ತಿದ್ದಲ್ಲಿ ಅದನ್ನು ನಿಜವಾದ ದೇವರ ಪೂಜೆ ಎಂದು ಕರೆಯಲು ಸಾಧ್ಯವಿಲ್ಲ.

17. ದೇವರ ಪೂಜೆಯ ಹೆಸರಿನಲ್ಲಿ ತನಗೆ ಅಥವಾ ಇತರರಿಗೆ ತೊಂದರೆ ಉಂಟುಮಾಡುವುದು ಕೇವಲ ಡಂಭಾಚಾರವೇ ಹೊರತು ಅದರಿಂದ ಪರಮಾತ್ಮನ ಸಾಕ್ಷಾತ್ಕಾರ ಖಂಡಿತಾ ಸಾಧ್ಯವಿಲ್ಲ.

18. ಯಾವುದೇ ಪೂಜೆ, ಆಚರಣೆಗಳನ್ನೂ ಅತಿಯಾಗಿ ನಂಬದೇ ತನಗೆ ಬಂದ ಕರ್ಮಗಳನ್ನು ನಿಷ್ಠೆಯಿಂದ ಆಚರಿಸುತ್ತಾ ಧರ್ಮ ಮಾರ್ಗದಲ್ಲಿ ನಡೆಯುವುದೂ ಸಹ ಒಂದು ರೀತಿಯ ಭಗವಂತನ ಆರಾಧನೆಯೇ.

19. "ನಂಬಿ ಕೆಟ್ಟವರಿಲ್ಲವೋ" ಎಂಬ ದಾಸರ ನುಡಿಯಂತೆ ದೇವರು ಇದ್ದಾನೆಯೋ ಇಲ್ಲವೋ ಎಂಬ ಜಿಜ್ಞಾಸೆಯಲ್ಲಿ ಸಮಯ ವ್ಯರ್ಥಮಾಡುವುದರ ಬದಲು, ನಮ್ಮ ನಮ್ಮ ದೇವರ ಬಗೆಗಿನ ನಂಬಿಕೆ ನಮಗೆಷ್ಟು ಧೈರ್ಯವನ್ನು, ನೆಮ್ಮದಿಯನ್ನು ನೀಡುತ್ತಿದೆ ಎಂಬುದರ ಅರಿವನ್ನು ಪಡೆದು ಮುನ್ನಡೆಯುವುದು ಮುಖ್ಯವೆನಿಸುತ್ತದೆ.

20. ಒಟ್ಟಾರೆ "ಏನಕೇನ ಪ್ರಕಾರೇಣ" ಎಂಬಂತೆ ದೇವರ ಹೆಸರಿನಲ್ಲಿ ಅಥವಾ ನಿಷ್ಕಾಮಕರ್ಮಾಚರಣೆಯನ್ನು ಮಾಡುತ್ತಾ ಧರ್ಮ ಮಾರ್ಗದಲ್ಲಿ ನಡೆಯುವುದು ನಿಜವಾಗಿಯೂ ಭಗವಂತನ ದರ್ಶನಕ್ಕೆ, ಅವನಿಗೆ ಹತ್ತಿರಾಗುವುದಕ್ಕೆ ಮತ್ತು ಇಹ ಪರಗಳಲ್ಲೂ ಸಾರ್ಥಕತೆಯನ್ನು ಕಂಡುಕೊಳ್ಳಲು ಇರುವ ಸಾಧನ ಎಂಬುದರಲ್ಲಿ ಸಂಶಯವಿಲ್ಲ.


ವಿಷಯ: ದೇವರು

ಹೆಸರು: ಭಾಗ್ಯಶ್ರೀ ದತ್ತಾರಾಮ್

ಮೊಬೈಲ್ ನಂಬರ್: 9980274908


ಶ್ರೀ ರಾಮ


ಸರ್ವೋತ್ತಮ ನಾದ ಶ್ರೀಹರಿ ಶ್ರೀ ರಾಮ


ಶ್ರೀ ರಾಮ ಎಂದರೆ ಸರಳ ಜೀವನ


ಶ್ರೀರಾಮ ಯಾವಾಗಲೂ ಸತ್ಯದ ಪರವಾಗಿ ನಿಂತ.


ಶ್ರೀ ರಾಮ ತಂದೆಯ ಮಾತನ್ನು ತಪ್ಪದೇ ಪಾಲಿಸಿದ.


ಶ್ರೀ ರಾಮ ಸ್ಥಿತ ಪ್ರಜ್ಞ.ಪಟ್ಟಾಭಿಷೇಕ ಎಂದಾಗ ಹಿಗ್ಗಲಿಲ್ಲ,ವನವಾಸ ಎಂದಾಗ ಕುಗ್ಗಲಿಲ್ಲ.


ಶ್ರೀರಾಮ ಯಾವಾಗಲೂ ಸೋತವರ,ನೊಂದವರ,ಸಾಮಾನ್ಯ ಜನರ ಪರವಾಗಿ ಇದ್ದ.


ಶ್ರೀ ರಾಮ ಮರ್ಯಾದಾ ಪುರುಷೋತ್ತಮ


ಶ್ರೀ ರಾಮ ಅರಣ್ಯದಲ್ಲಿ ಋಷಿಗಳ,ಮುನಿಗಳ,ಸಾಧು ಸಂತರ,ಬೈರಾಗಿಗಳ,ಪ್ರಾಣಿ,ಪಕ್ಷಿ, ಗಿಡ,ಮರ ಇವುಗಳು

ಕಷ್ಟಗಳನ್ನು ವಿಚಾರಿಸಿದ ಮಹಾನ್ ವ್ಯಕ್ತಿ.


ಓಂ ನಮಃ ಶಿವಾಯ ಓಂ ನಮೋ ನಾರಾಯಣಯ ಎರಡರಲ್ಲೂ ರಾಮ ಅಕ್ಷರ ಇದೆ.


ಶ್ರೀ ರಾಮ ಶಬರಿ ಕೊಟ್ಟ ಹಣ್ಣನ್ನು ಸ್ವೀಕಾರ ಮಾಡಿದ.


ಶ್ರೀ ರಾಮ ಅಹಲ್ಯಾ ಶಾಪ ವಿಮೋಚನೆ ಮಾಡಿದ.


ಶ್ರೀ ರಾಮ ಕೈಕೇಯಿ ಯನ್ನು ಎಂದು ಅಗೌರವ ದಿಂದ ನೋಡಲಿಲ್ಲ.


ಶ್ರೀ ರಾಮ ರಾಮೇಶ್ವರದಲ್ಲಿ ಮರಳಿನ ಲಿಂಗ ಪ್ರತಿಷ್ಠಾಪಿಸಿ ಪೂಜೆ ಮಾಡಿದ.ಮನೋನಿಯಮಕರು ರುದ್ರ ದೇವರ ಪೂಜೆ ಎಲ್ಲಾ ಜನರು ಮಾಡಿ ಎಂದು ತೋರಿಸಿಕೊಟ್ಟಿದ್ದಾರೆ.


ಶ್ರೀ ರಾಮನ ಪರವಾಗಿ ಯುದ್ಧದಲ್ಲಿ ಸತ್ತ ಎಲ್ಲಾ ಕಪಿಗಳು ಮತ್ತೆ ಸಂಜೀವಿನಿ ಔಷಧದಿಂದ ಬದುಕಿಸಿದ.


ಶ್ರೀರಾಮನಿಗೆ ಹನುಮಂತನ ಮೇಲೆ ಅಪಾರ ವಾದ ನಂಬಿಕೆ.


ಶ್ರೀ ರಾಮ ಜಟಾಯು ಅಂತ ಪಕ್ಷಿಗೂ ಕೂಡ ಸೇವೆ ಮಾಡಲು ಅವಕಾಶ ಕೊಟ್ಟ ಮಹಾ ಪ್ರಭು.


ಶ್ರೀ ರಾಮ ಯುದ್ಧದಲ್ಲಿ ಗೆದ್ದರು ರಾಜ್ಯವನ್ನು ವಿಭೀಷಣನಿಗೆ ಕೊಟ್ಟನು.


ಶ್ರೀ ರಾಮ 36,000 ಮೂವತ್ತಾರು ಸಾವಿರ ವರ್ಷ ರಾಜ್ಯಭಾರ ಮಾಡಿದ.


ಭಗವಂತನ ಎಲ್ಲಾ ಅವತಾರಗಳಲ್ಲಿ ಇದೆ ಹೆಚ್ಚಿನ ಅವಧಿ.


ಶ್ರೀ ರಾಮ ಅವತಾರದ ಕೊನೆಯಲ್ಲಿ ಎಲ್ಲರನ್ನೂ ಪುಷ್ಪಕ ವಿಮಾನದಲ್ಲಿ ಮೋಕ್ಷಕ್ಕೆ ಕರೆದುಕೊಂಡು ಹೋದ ಅಪ್ರತಿಮ ವ್ಯಕ್ತಿ.


ಅವನದು ಅನಂತ ಗುಣಗಳು.ನಮ್ಮ ಶಕ್ತಿ ಇಷ್ಠೇ ವರ್ಣಿಸಲು.


ಮಧು ಬರಹಗಾರ.



We had asked what is the (Basic Qualities) of Rayara Bhaktaru? or Qualifications to be Rayara Bhaktaru

Many have responded:

BHAKTI ,

Pure Trust in any Situation Devotion, dedication, service, ತ್ಯಾಗ, ಔದಾರ್ಯ, ದಾನ, ಸಹಿಷ್ಣುತೆ, Gnana, Bhakti and Vairagya, Belief, Firstly Respect and Believe on Guruji, Shudda Samkalpa, ಗುರು ಚರಣಗಳಿಗೆ ಶರಣು.ಸದಾ ಗುರು ಸಮ್ಮುಖದಲ್ಲಿ ಇರುವುದು.ಗುರು ಸ್ಮರಣೆ,ಗುರು ಸೇವೆ,ಗುರುಗಳ ಪ್ರಸಾದ, ಇದರಿಂದ ವಾಯು ದೇವರ,ಭಗವಂತನ ಕೃಪೆ ಆಗುತ್ತದೆ.


ಮಂತ್ರಾಲಯ ಮಠದ ಯತಿ ಪರಂಪರೆ

*ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಗುರು ಪರಂಪರೆಗಳ ಬೃಂದಾವನ ಸ್ಥಳ ಹಾಗೂ ಬೃಂದಾವನ

1) *ಶ್ರೀಮಧ್ವಾಚಾರ್ಯರು- 1237 – 1317 ಬದರೀಕಾಶ್ರಮ ಪ್ರವೇಶ

2) ಶ್ರೀಪದ್ಮನಾಭ ತೀರ್ಥರು-1317-1324 ಬೃಂದಾವನ ಸ್ಥಳ : ಆನೆಗೊಂದಿ ತುಂಗಭದ್ರಾ ನದಿ ತೀರ (ನವವೃಂದಾವನ)

3) ಶ್ರೀನರಹರಿ ತಿರ್ಥರು-1324-1333 ಬೃಂದಾವನ ಸ್ಥಳ : ಹಂಪಿ

4) ಶ್ರೀಮಾಧವ ತೀರ್ಥರು-1333-1350 ಬೃಂದಾವನ ಸ್ಥಳ- : ಮಣ್ಣೂರು

5) ಶ್ರೀಅಕ್ಷೋಭ್ಯ ತೀರ್ಥರು-1350-1365 ಬೃಂದಾವನ ಸ್ಥಳ : -ಮಳಖೇಡ. ಕಾಗಿಣೀ ತೀರ

6) *ಶ್ರೀಜಯತೀರ್ಥರು (ಟೀಕಾಚಾರ್ಯರು)-1365-1388* ಬೃಂದಾವನ ಸ್ಥಳ – ಮಳಖೇಡ. ಕಾಗಿಣೀ ತೀರ

7) ಶ್ರೀವಿದ್ಯಾಧಿರಾಜ ತೀರ್ಥರು-1388-1392. ಬೃಂದಾವನ ಸ್ಥಳ- : ಯರಗೋಳ

8) ಶ್ರೀಕವೀಂದ್ರ ತೀರ್ಥರು-1392-1398 ಬೃಂದಾವನ ಸ್ಥಳ ; ನವಬೃಂದಾವನ

9) ಶ್ರೀವಾಗೀಶ ತೀರ್ಥರು-1398-1406 ಬೃಂದಾವನ ಸ್ಥಳ- ; ನವಬೃಂದಾವನ ಗಡ್ಡೆ

10) ಶ್ರೀರಾಮಚಂದ್ರ ತೀರ್ಥರು-1406-1435 ಬೃಂದಾವನ ಸ್ಥಳ-: ಯರಗೋಳ

11) ಶ್ರೀವಿಬುಧೇಂದ್ರತೀರ್ಥರು-1435-1490. ಬೃಂದಾವನ ಸ್ಥಳ-ತಿರುನೆಲ್ವೇಲಿ(ತಮಿಳನಾಡು)

12) ಶ್ರೀಜೀತಾಮಿತ್ರತೀರ್ಥರು-1490-1492 ಬೃಂದಾವನ ಸ್ಥಳ-ಜಿತಾಮಿತ್ರ ಗಡ್ಡಿ ಕೃಷ್ಣ ನದಿ ತೀರದಲ್ಲಿ ಅದೃಶ್ಯ(ಕರ್ನಾಟಕ)

13) ಶ್ರೀರಘುನಂದನತೀರ್ಥರು-1492-1504 ಬೃಂದಾವನ ಸ್ಥಳ- ಹಂಪಿ

14) ಶ್ರೀಸುರೇಂದ್ರತೀರ್ಥರು-1504-1575 ಬೃಂದಾವನ ಸ್ಥಳ : ಮದುರೈ(ತಮಿಳುನಾಡು)

15) ಶ್ರೀವಿಜಯೇಂದ್ರತೀರ್ಥರು-1575-1614 ಬೃಂದಾವನ ಸ್ಥಳ-ಕುಂಭಕೊಣಂ (ತಮಿಳುನಾಡು)

16) ಶ್ರೀಸುಧೀಂದ್ರತೀರ್ಥರು-1614-1623 ಬೃಂದಾವನ ಸ್ಥಳ-ನವಬೃಂದಾವನಗಡ್ಡೆ ತುಂಗಭದ್ರಾ ತೀರ

17) ಶ್ರೀರಾಘವೇಂದ್ರತೀರ್ಥರು-1621-1671 ಬೃಂದಾವನ ಸ್ಥಳ- ಮಂತ್ರಾಲಯ

18) ಶ್ರೀಯೋಗೀಂದ್ರತೀರ್ಥರು-1671-1688 ಬೃಂದಾವನ ಸ್ಥಳ-ಶ್ರೀರಂಗಂ (ತಮಿಳುನಾಡು)

19) ಶ್ರೀಸೂರೀಂದ್ರತೀರ್ಥರು-1688-1692 ಬೃಂದಾವನ ಸ್ಥಳ : ಮದುರೈ (ತಮಿಳುನಾಡು)

20) ಶ್ರೀಸುಮತೀಂದ್ರತೀರ್ಥರು-1692-1725 ಬೃಂದಾವನ ಸ್ಥಳ-ಶ್ರೀರಂಗಂ(ತಮಿಳುನಾಡು)

21) ಶ್ರೀಉಪೇಂದ್ರತೀರ್ಥರು-1725-1728 ಬೃಂದಾವನ ಸ್ಥಳ-ಶ್ರೀರಂಗಂ (ತಮಿಳುನಾಡು)

22) ಶ್ರೀವಾದೀಂದ್ರತೀರ್ಥರು-1728-1750 ಬೃಂದಾವನ ಸ್ಥಳ- ಮಂತ್ರಾಲಯ(ಮಂಚಾಲೆ..ಆಂಧ್ರಪ್ರದೇಶ)

23) ಶ್ರೀವಸುದೇಂದ್ರತೀರ್ಥರು-1750-1761 ಬೃಂದಾವನ ಸ್ಥಳ- : ಕೆಂಚನಗುಡ್ಡ(ಕರ್ನಾಟಕ)

24) ಶ್ರೀವರದೇಂದ್ರತೀರ್ಥರು-1761-1785 ಬೃಂದಾವನ ಸ್ಥಳ-ಪುಣೆ(ಮಹಾರಾಷ್ಟ್ರ)

25) ಶ್ರೀಧೀರೇಂದ್ರತೀರ್ಥರು-1785 ಬೃಂದಾವನ ಸ್ಥಳ-ಹೊಸರಿತ್ತಿ(ಕರ್ನಾಟಕ )

26) ಶ್ರೀಭುವನೇಂದ್ರತೀರ್ಥರು-1785-1799 ಬೃಂದಾವನ ಸ್ಥಳ-ರಾಜೋಳಿ(ಕರ್ನಾಟಕ)

27) ಶ್ರೀಸುಭೋದೇಂದ್ರತೀರ್ಥರು-1799-1835 ಬೃಂದಾವನ ಸ್ಥಳ-ನಂಜನಗೂಡು(ಕರ್ನಾಟಕ)

28) ಶ್ರೀಸುಜನೇಂದ್ರತೀರ್ಥರು-1807-1836 ಬೃಂದಾವನ ಸ್ಥಳ-ನಂಜನಗೂಡು(ಕರ್ನಾಟಕ)

29) ಶ್ರೀಸುಜ್ಞಾನೇಂದ್ರತೀರ್ಥರು-1836-1861 ಬೃಂದಾವನ ಸ್ಥಳ-ನಂಜನಗೂಡು (ಕರ್ನಾಟಕ)

30) ಶ್ರೀಸುಧರ್ಮೇಂದ್ರತೀರ್ಥರು-1861-1872 ಬೃಂದಾವನ ಸ್ಥಳ-ಮಂತ್ರಾಲಯ(ಮಂಚಾಲೆ ಆಂಧ್ರಪ್ರದೇಶ)

31) ಶ್ರೀಸುಗುಣೇಂದ್ರತೀರ್ಥರು-1872-1884 ಬೃಂದಾವನ ಸ್ಥಳ-ಚಿತ್ತೂರು(ಆಂಧ್ರಪ್ರದೇಶ)

32) ಶ್ರೀಸುಪ್ರಜ್ಞೇಂದ್ರತೀರ್ಥರು-1884-1903 ಬೃಂದಾವನ ಸ್ಥಳ-ನಂಜನಗೂಡು (ಕರ್ನಾಟಕ)

33) ಶ್ರೀಸುಕೃತೇಂದ್ರತೀರ್ಥರು-1903-1912 ಬೃಂದಾವನ ಸ್ಥಳ-ನಂಜನಗೂಡು (ಕರ್ನಾಟಕ)

34) ಶ್ರೀಸುಶೀಲೇಂದ್ರತೀರ್ಥರು-1912-1926 ಬೃಂದಾವನ ಸ್ಥಳ-ಹೊಸರಿತ್ತಿ(ಕರ್ನಾಟಕ)

35) ಶ್ರೀಸುವ್ರತೀಂದ್ರತೀರ್ಥರು-1926-1933 ಬೃಂದಾವನ ಸ್ಥಳ-ಮಂತ್ರಾಲಯ(ಮಂಚಾಲೆ ಆಂಧ್ರಪ್ರದೇಶ)

36) ಶ್ರೀಸುಯಮೀಂದ್ರತೀರ್ಥರು-1933-1967 ಬೃಂದಾವನ ಸ್ಥಳ-ಮಂತ್ರಾಲಯ (ಮಂಚಾಲೆ ಆಂಧ್ರಪ್ರದೇಶ)

37) ಶ್ರೀಸುಜಯೀಂದ್ರುತೀರ್ಥರು-1963-1986 ಬೃಂದಾವನ ಸ್ಥಳ-ಮಂತ್ರಾಲಯ (ಮಂಚಾಲೆ ಮಂತ್ರಾಲಯ)

38) ಶ್ರೀಸುಶಮೀಂದ್ರತೀರ್ಥರು-1985-2009 ಬೃಂದಾವನ ಸ್ಥಳ-ಮಂತ್ರಾಲಯ (ಮಂಚಾಲೆ ಆಂಧ್ರಪ್ರದೇಶ)

39) ಶ್ರೀಸುಯತೀಂದ್ರತೀರ್ಥರು-2006-2014 ಬೃಂದಾವನ ಸ್ಥಳ-ಮಂತ್ರಾಲಯ (ಮಂಚಾಲೆ ಆಂಧ್ರಪ್ರದೇಶ)

ಶ್ರೀಸುಬುದೇಂದ್ರತೀರ್ಥರು ಪ್ರಸ್ತುತ ಮಂತ್ರಾಲಯ ಪೀಠಾದೀಪತಿಗಳು

*ಸಂಕ್ಷಿಪ್ತ ದೇವರ ಪೂಜಾ ಪದ್ದತಿಃ*

ಸ್ನಾನ ಮಾಡಿ ಮಡಿಬಟ್ಟೆಯನ್ನುಟ್ಟು ನಾಮ ಮುದ್ರಾಧಾರಣೆ ಹಾಗೂ ಸಂದ್ಯಾವಂದನೆಯನ್ನು ಮಾಡಿ ದೇವರ ಪೂಜೆಯನ್ನು ಮಾಡಬೇಕು

*ಸಂಕಲ್ಪ:-* ಆಚಮ್ಯ, ಪ್ರಾಣಾನಾಯಮ್ಯ ದೇಶಕೌಲೌ ಸಂಕೀರ್ತ್ಯ, ಗೋವಿಂದ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ವಿಷ್ಣು ಪ್ರೀತ್ಯರ್ಥಂ ದೇವತಾಪೂಜಾಂಕರಿ ಷ್ಯೇ||

ವಂದೇ ವಿಷ್ಣು ನಮಾಮಿ ಶ್ರಿಯಮಥ ಚ ಭುವಂ ಬ್ರಹ್ಮವಾ ಯೂ ಚ ವಂದೇ|

ಗಾಯತ್ರೀಂ ಭಾರತೀಂ ತಾಮಪಿ ಗರುಮನಂತಂ ಭಜೇ ರುದ್ರದೇವಂ ||

ದೇವಿ ವಂದೇ ಸುಪರ್ಣಿಮಹಿಪತಿದ ಯಿತಾಂ ವಾರುಣೀಮಪ್ಯುಮಾಂತಾಂ |

ಇಂದ್ರಾದೀನ್ ಕಾಮಮುಖ್ಯಾನಪಿ ಸಕಲಸುರಾನ್ ತದ್ಗುರೂನ್ ಮದ್ಗುರೂಂಶ್ಚ ||

*ದ್ವಾರದೇವತಾಭ್ಯೋನಮಃ||*

*ಸರ್ವಾರಿಷ್ಟನಿರಶನಮಸ್ತು||*

ದೀಪ ಪ್ರಜ್ಚಾಲನ ಮಾಡಿ ಘಂಟೆ ಯನ್ನು ಬಾರಿಸಬೇಕು.

*ಶಾಲಿಗ್ರಾಮ* ೧

*ಶಂಖ* ೧

*ಪ್ರಾಣದೇವರು*೧

*ಗರುಡಶೇಷ*

*ಗುರುಗಳು* ಇವುಗಳನ್ನು ಬೇರೆ ಬೇರೆ ತಟ್ಟೆಯಲ್ಲಿ ಇಡಬೇಕು.

*ನಿರ್ಮಾಲ್ಯವಿಸರ್ಜನೆ {ದೇವರಿಗೆ ಏರಿಸಿದ ಹೂ ತುಳಸಿಗಳ ನ್ನು ತೆಗೆಯುವುದು}

ಓಂ ಹಂ ರುದ್ರೇ {ಈ ಮಂತ್ರದಿಂದ}

*ನಿರ್ಮಾಲ್ಯಾಭಿಷೇಕ* {ಶಾಲಿಗ್ರಾಮಕ್ಕೆ}

ಓಂ ಸಹಸ್ರ ಶೀರ್ಷಾಪುರುಷಃ {ಈ ಮಂತ್ರದಿಂದ}

*ಶಾಲಿಗ್ರಾಮವನ್ನು ತೆಗೆದಿಟ್ಟು ತೀರ್ಥವನ್ನು ಇಟ್ಟುಕೊಳ್ಳಬೇಕು*

*ಶಂಖಾಭಿಷೇಕ:-*

ಹಿರಣ್ಯವರ್ಣಾಂ ಹರೀಣಿಂ {ಈ ಮಂತ್ರದಿಂದ}

*ಪ್ರಾಣದೇವರ ಅಭಿಷೇಕ:-*

*ಮಾತರ್ಮೇ ಮಾತರಿಶ್ವನ್ ಪಿತರ ತುಲಗುರೋಭ್ರಾತರಿಷ್ಟಾಪ್ತಬಂಧೋ|*

*ಸ್ವಾಮಿನ್ ಸರ್ವಾಂತರಾತ್ಮನ್ನ ಜರಜರಯಿತರ್ಜುನ್ಮಮೃತ್ಯಾಮಯಾನಾಂ||*

*ಗೋವಿಂದೇ ದೇಹಿ ಭಕ್ತಿಂ ಭವತಿ ಚ ಭಗವನ್ನೂರ್ಜಿತಾಂನಿರ್ನಿಮಿತ್ತಾಂ |*

*ನಿರ್ವ್ಯಾಜಾಂ ನಿಶ್ಚಲಾಂ ಸದ್ಗುಣಗಣಬೃಹತೀಂಶಾಶ್ವತೀಮಾ ಶುದೇವಾ||*

*ಗರುಡ ಶೇಷಾಭಿಷೇಕ:-*

ಗರುಡಾಯನಮಃ ಶೇಷಾಯನಮಃ

*ಗುರುಗಳ ಅಭಿಷೇಕ;-*

*ಬ್ರಹ್ಮಾಂತಾ ಗುರವಃ ಸಾಕ್ಷಾದಿಷ್ಟಂ ದೈವಂಶ್ರಿಯಃಪತಿಃ|*

*ಆಚಾರ್ಯಃ ಶ್ರೀಮದಾಚಾರ್ಯಸ್ಸಂತು ಮೇ ಜನ್ಮಜನ್ಮನಿ||*

ದೇವರ ನಿರ್ಮಾಲ್ಯತೀರ್ಥವನ್ನು ಶಂಖ, ಪ್ರಾಣದೇವರು, ಗರುಡಶೇಷರು ಗುರುಗಳು ಎಲ್ಲರಿ ಗೂ ಮೂರು ಸಲ ಕೊಡಬೇಕು. ಆಮೇಲೆ ಶಂಖಾದಿಗಳನ್ನು ಒರಿಸಿ ಇಡಬೇಕು. { ನಂತರ ಗಂಧ, ಸ್ವಾದೋದಕ, ಅಕ್ಷತೆಗಳನ್ನು ಸಿದ್ದ ಮಾಡಬೇಕು.}

*ಕಲಶ ಪೂಜಾ:-* {ಕಲಶದಲ್ಲಿ ನೀರು ತುಂಬಿ, ತುಳಸಿಯನ್ನು ಹಾಕಿ ಗಂಧ ಅಕ್ಷತೆ ಹಚ್ಚಿ ಅಭಿಮಂತ್ರಣ ಮಾಡಬೇಕು}

*ಕಲಶದೇವತಾಭ್ಯೋನಮಃ ಅಜಾದಿದೇವತಾಭ್ಯೋನಮಃ*

*{ಓಂ ನಾರಾಯಣಾಯ ಓಂ ೮ಸಲ ಅನ್ನಬೇಕು}*

ಶಂಖ ಪೂಜಾ ಶಂಖದಲ್ಲಿ ನೀರು ಹಾಕಿ ಗಂದ ತುಳಸಿ ಏರಿಸಿ ಪೂಜೆ ಮಾಡಿ

ಶಂಖದನೀರನ್ನು ಎಲ್ಲ ಕಡೆಗೂ ಪ್ರೋಕ್ಷಣೆ ಮಾಡಬೇಕು

*ಶುದ್ಧಾಭಿಷೇಕ*:-

ಸಹಸ್ರಶೀರ್ಷಾ....... ಈ ಮಂತ್ರವನ್ನು ಹೇಳುತ್ತಾ ಕಲಶದಲ್ಲಿರುವ ನೀರನ್ನು ತೆಗೆದು ಕೊಂಡು ಶಂಖದಿಂದ ಅಭಿಷೇಕ ಮಾಡಬೇಕು. ಸ್ವಾದೋದಕದಿಂದ ಲೂ ಅಭಿಷೇಕ ಮಾಡಬೇಕು. ಶಾಲಿಗ್ರಾಮವನ್ನು ತೆಗೆದಿಟ್ಟು ತೀರ್ಥವನ್ನು ಇಟ್ಟುಕೊಳ್ಳಬೇಕು.

*ಅರ್ಚನೆ* ಕೇಶವಾಯನಮಃ

*ನಮೋಸ್ತ್ವನಂತಾಯ ಸಹಸ್ರಮೂರ್ತಯೇ ಸಹಸ್ರ ಪಾದಕ್ಷಿಶಿರೋರು ಬಾಹುವೇ|*

*ಸಹಸ್ರನಾಮ್ನೇಪುರುಷಾಯಶಾಶ್ವತೇ ಸಹಸ್ರಕೋಟಿಯುಗಧಾರಿಣೇ ನಮಃ||*

ಈ ಮಂತ್ರವನ್ನು ಹೇಳುತ್ತಾ ಗಂಧ ತುಳಸೀ, ಪುಷ್ಪಗಳನ್ನು ದೇವರಿಗೆ ಸಮರ್ಪಿಸಿಬೇಕು.

*ಧೂಪದೀಪ*{ಕೆಂಡದ ಮೇಲೆ ದಶಾಂಗವನ್ನು ಹಾಕಿ ಧೂಪಾರತಿ ಯನ್ನು ಮಾಡಬೇಕು .ಧೂಪಂ ಸಮರ್ಪಯಾಮಿ || ೩ಎಳಿ ಬತ್ತಿಗಳಿಂದ ಏಕಾರತಿಯನ್ನು ಮಾಡಬೇಕು . ದೀಪಂ ಸಮರ್ಪಯಾಮಿ||

*ನೇವೇದ್ಯ:-* ನೀರಿನಿಂದ ಚತುಸ್ರಮಂಡಲ ಮಾಡಿ ಅದರ ಮೇಲೆ ನೈವೇದ್ಯವನ್ನು ಇಟ್ಟು ಅಭಿಘಾರಮಾಡಿ, ಗಾಯತ್ರೀ ಮಂತ್ರ ಹೇಳಿ, ಪ್ರೋಕ್ಷಣೆ ಮಾಡಿ ತುಳಸೀದಳಹಾಕಿ ಪರಿಷೇಚನೆ ಮಾಡಬೇಕು ಆಮೇಲೆ ಆಮೇಲೆ ಶಂಖ ಚಕ್ರ ಧೇನು ತಾರ್ಕ್ಷ್ಯ, ಮೇರು ಚಂದ್ರ, ಈ ಮುದ್ರೆಗಳನ್ನು ತೋರಿಸಬೇಕು.

ಆಮೇಲೆ ಓಂ ಓಂ ನಮೋ ನಾರಾಯಣಾಯ ಓಂ ಈ ಮಂತ್ರವನ್ನು ೧೨, ಅಥವಾ ೧೦೮, ಯಥಾಶಕ್ತಿ ಪಠಿಸಬೇಕು, ಅನ್ನದಲ್ಲಿ ರುವ ದೇವರು ಪ್ರತಿಮೆಯಲ್ಲಿರುವ ದೇವರು ತನ್ನಲ್ಲಿರುವದೇವರು ಒಂದೇ ಎಂದು ಸ್ಮರಿಸಬೇಕು.

*ಆಪೋಶನಂ ಸಮರ್ಪಯಾಮಿ|| ಅಮೃತೋಪಸ್ತರಣ ಮಸಿಸ್ವಾಹಾ|*

*ಪ್ರಾಣಾಯಸ್ವಾಹಾ|| ಅಪಾನಾಯಸ್ವಾಹಾ|| ವ್ಯಾನಾಯ ಸ್ವಾಹಾ||*

*ಉದಾನಾಯಸ್ವಾಹಾ|| ಸಮನಾಯಸ್ವಾಹಾ||*

*ಉತ್ತರಾಪೋಶನಂ ಸಮರ್ಪಯಾಮಿ| ಅಮೃತಾಪಿಧಾನಮಸಿ ಸ್ವಾಹಾ||*

ಈ ಮಂತ್ರಗಳಿಂದ ಶುದ್ದವಾದ ನೀರನ್ನು ಶಂಖದಿಂದ ಪಾತ್ರೆಯಲ್ಲಿ ಬಿಡಬೇಕು.

*ಮಹಾಮಂಗಳಾರತಿ:-*

*ಜಯತಿ ಹರಿಚಿಂತ್ಯಃ ಸರ್ವದೇವೈ ಕವಂದ್ಯಃ|*

*ಪರಮ ಗುರುಭೀಷ್ಟಾವಾಪ್ತಿದಃ ಸಜ್ಜನಾನಾಂ||*

*ನಿಖಿಲಗುಣಾಗಣಾರ್ಣೋ ನಿತ್ಯನಿರ್ಮುಕ್ತದೋಷಃ||*

*ಸರಸಿಜನಯನೋಸೌ ಶ್ರೀಪತಿರ್ಮಾನದೋನಃ||*

*ರಮಾದಿಪೂಜೆ:-* ಶಂಖಾದಿಗಳಿ ಗೆ ತೀರ್ಥ, {೩ಸಲ ನಿರ್ಮಾಲ್ಯ ಗಂಧ ತುಳಸೀ ಪುಷ್ಪಗಳನ್ನು ಸಮರ್ಪಿಸಿ, ನೈವೇದ್ಯವನ್ನು ಮಾಡಬೇಕು *{ಒಂದು ತಟ್ಟೆಯಲ್ಲಿ ವೈಶ್ವದೇವಕ್ಕೆ ಅನ್ನವನ್ನು ಇಟ್ಟುಕೊಂಡು ಗರುಡಶೇಷರಿಗೆ ಬೇರೆ ಬೇರೆ ಅನ್ನವನ್ನು ತೆಗೆದು ಇಡಬೇಕು. }*

*ರಮಾಬ್ರಹ್ಮಾದಯೋದೇವಾಃ ಸನಕಾಧ್ಯಾಃ ಶುಕಾದಯಾಃ|*

*ಶ್ರೀನೃಸಿಂಹಪ್ರಸಾದೋsಯಂ ಸರ್ವೇಗೃಹ್ಣಂತು ವೈಷ್ಣವಾಃ||*

ಈ ಮಂತ್ರದಿಂದ ನೈವೇದ್ಯಮಾಡಿ ಮಂಗಳಾರತಿಯನ್ನು ಮಾಡಬೇಕು‌

ಬ್ರಹ್ಮಾಂತಾಗುರುವಃ....... ಈ ಮಂತ್ರದಿಂದ ಹಸ್ತೋದಕ ಮಾಡಬೇಕು ನಂತರ ದೇವರನ್ನು ಭುಜಂಗಿಸಬೇಕು.

*ಯಸ್ಯಸ್ಮೃತ್ಯಾಚನಾಮೋಕ್ತ್ಯಾತಪಃ ಪೂಜಾಕ್ರಿಯಾದಿಷು|*

*ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋವಂದೇ ತಮಚ್ಯುತಂ||*

*ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ರಮಾಪತೇ||*

*ಯತ್ಕೃತಂತು ಮಯಾದೇವ ಪರಿಪೂರ್ಣಂ ತದುಸ್ತುಮೇ||*

ಅನೇನ ದೇವ ಪೂಜನೇನ ಭಾರತೀರಮಣಮುಖ್ಯಪ್ರಾಣಂತರ್ಗತ ಲಕ್ಷ್ಮೀನಾರಾಯಣಃ ಪ್ರಿಯತಾಂ ಪ್ರೀತೋಭವತು||

*||ಶ್ರೀಕೃಷ್ಣಾರ್ಪಣಮಸ್ತು||*

*ಸೂಚನೆ:-* ಏಕಾದಶಿ ದಿವಸಾ ಶಂಖಾದಿಗಳಿಗೆ ಒಂದು ಸಲ ತೀರ್ಥ ಕೊಡಬೇಕು. ಮತ್ತು ಗಂಧ ನೈವೇದ್ಯ ಸಮರ್ಪಣೆ ಇರುವುದಿಲ್ಲಾ ದೇವರಿಗೂ ಸ್ವಾದೋಕದಿಂದ ಅಭಿಷೇಕ ಮತ್ತು ಅನ್ನಾದಿಗಳ ನೈವೇದ್ಯ ಇರುವುದಿಲ್ಲ. ಕೇವಲ ಫಲ ಸಮರ್ಪಣೆ ಮಾಡಬೇಕು

ಸಂಗ್ರಹ ಲೇಖನ

...........ಅನಂತಾರ್ಯದಾಸ.......

ಪಂ.ಮುಕುಂದಾಚಾರ್ಯ.ಧ್ರು.ಜೋಶಿ, ಶ್ರೀ ಗೋಪಾಲ ಸಂಸ್ಕ್ರತ ಪಾಠಶಾಲಾ, ಸತ್ಯನಾಥಕಾಲೋನಿ, ರಾಯಚೂರ

Mo.+918884223366 WhatsApp, Mo.+919480349222, pH.08532223366, Email:-mjmannur@gmail.com


ತುಳಸಿ ಮಠ ಪ್ರಶಾಂತ ಸ್ಥಳ,ಜಾಗೃತ ಸ್ಥಳ.ಶ್ರದ್ಧಾ,ಭಕ್ತಿ,ಯಿಂದ ಬರಬೇಕು.ಮನಸ್ಸು ಶ್ರೀ ಹರಿ ವಾಯು ಗುರುಗಳಲ್ಲಿ,ತುಲಾ ಭಾರ,ದೀಪ ಹಚ್ಚುವುದು,ಪ್ರದಕ್ಷಿಣೆ ನಮಸ್ಕಾರ ಮಾಡಿ ಬರುವಾಗ ಖಂಡಿತ ಪ್ರಸಾದ ಸಿಗುತ್ತದೆ.

ಮುಂಚಿತವಾಗಿ ತಿಳಿಸಿ ಹೋದರೆ ವ್ಯವಸ್ಥೆ ಮಾಡಲು ಸಮಿತಿ ಯವರಿಗೆ ಅನುಕೂಲವಾಗುತ್ತದೆ.

ಎಲ್ಲಾ ಕಡೆ ಶಿಸ್ತು ಪಾಲಿಸುವಾಗ ಮಠಕ್ಕೆ ಬರುವಾಗ ಏನು ತೊಂದರೆ?

98xxxxxx75

ಷೋಡಶ ಉಪಚಾರ

೧ )ಅವಾಹನೆ, ೨)ಆಸನ ೩) ಪಾದ್ಯ ೪) ಅರ್ಘ್ಯ ೫)ಆಚಮನೀಯ ೬)ಸ್ನಾನ ೭)ವಸ್ತ್ರ ೮) ಯಜ್ಣೊಪವೀತ, ೯) ಗಂಧ ೧೦) ಪುಷ್ಪ ಅರ್ಚನೆ ೧೧) ಧೂಪ ೧೨) ದೀಪ ೧೩) ನೈವೇದ್ಯ ೧೪) ಮಂಗಳಾರತಿ, ಪ್ರದಕ್ಷಿಣೆ, ನಮಸ್ಕಾರ

*ಸಂಕ್ಷಿಪ್ತ ವೈಷ್ಣವ ದೇವ ಪೂಜಾ ಪದ್ಧತಿ*

ಮೊದಲು ದೇವಗೃಹವನ್ನು ಪ್ರವೇಶಿಸುವುದು.

ದೀಪವನ್ನು ಹಚ್ಚಿ ಗಂಟಾನಾದ ಶಂಖನಾದದೊಡನೆ ಬಾಗಿಲನ್ನು ತೆರೆಯುವುದು.

ಸಂಧ್ಯಾವಂದನೆ ಮಾಡುವುದು ,

೧ ) *ಭೂತೋಚ್ಚಾಟನ*

ಅಪಸರ್ಪಂತು ಯೇ ಭೂತಾಃ

ಯೇ ಭೂತಾಃ ಭುವಿ ಸಂಸ್ಥಿತಾಃ

ಯೇ ಭೂತಾಃ ವಿಘ್ನಕರ್ತಾರಃ

ತೇ ನಶ್ಯಂತು ಶಿವಾಜ್ಞಯಾ ||

ಅಪಕ್ರಾಮಾಂತು ಭೂತಾನಿ ಕ್ರೂರಾಚೈವತು ರಾಕ್ಷಸಾಃ | ತೇಷಾಮಪ್ಯ ವಿರೋಧೇನಾ ಪೂಜಾಕರ್ಮ ಸಮಾರಭೇತ್ || ಇತೀ ಭೂತೋಚ್ಚಾಟನಂ.

೨) *ಗಂಟಾನಾದ*

ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಮ್ ಕುರು ಗಂಟಾರವಂ ತತ್ರ ದೇವತಾಹ್ವಾನ ಸೂಚಕಮ್ ||

೩) *ಆಚಮನ*- *ಪ್ರಾಣಾಯಾಮ* -

*ಸಂಕಲ್ಪ*

ಶ್ರೀವಿಷ್ಣು ಪ್ರೇರಣೇಯಾ ಶ್ರೀವಿಷ್ಣು ಪ್ರೀತ್ಯರ್ಥಂ ಯಥಾ ಶಕ್ಯ್ತಾ ಯಥಾ ಜ್ಞಾನೇನ ಶ್ರೀ ಲಕ್ಷ್ಮಿನಾರಾಯಣಸ್ಯ ಧ್ಯಾನವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ .

೪ ] *ಕಲಶಪೂಜೆ*

ಒಂದು ಸಣ್ಣ ಕಲಶದಲ್ಲಿ ನೀರನ್ನು ತುಂಬಿಸಿ , ಗಂಧ (ಗಂಧೋದಕ) ತುಳಸಿ , ಹೂ ( ಷಟ್ಟೋಣ ) ಹಾಕಿ ಕಲಶವನ್ನು ಮುಟ್ಟಿ ಈ ಕೆಳಗಿನ ಮಂತ್ರವನ್ನು ಹೇಳಬೇಕು .

ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು .....

ಕಲಶಃ ಕೀರ್ತಿಮಾಯುಶ್ಚ ಪ್ರಜ್ಞಾಂ ಮೇಧಾಂ ಶ್ರಿಯಂ ಬಲಮ್ | ಯೋಗ್ಯತಾಂ ಪಾಪಹಾನಿಂ ಚ ಪುಣ್ಯವೃದ್ಧಿಂ ಚ ಸಾಧಯೇತ್ || ಅನೇನ ಕಲಶಪೂಜನೇನ ಭಗವಾನ್ ತತ್ಸತ್ ಶ್ರೀಕೃಷ್ಣಾರ್ಪಣಮಸ್ತು ||

[ ಈ ಕಲಶದ ನೀರನ್ನು ದೇವರ ಅಭಿಷೇಕದ ( ಪ್ರೋಕ್ಷಣೆ ) ಸಂದರ್ಭದಲ್ಲಿ ಉಪಯೋಗಿಸಬೇಕು ]

೫), *ಶಂಖಪೂಜೆ*

ತ್ವಂ ಪುರಾ ಸಾಗರೋತ್ಪನ್ನೋ ವಿಷ್ಣುನಾ ವಿಧೃತಃ ಕರೇ | ನಮಿತಃ ಸರ್ವ ದೇವೈಶ್ಚ ಪಾಂಚಜನ್ಯ ನಮೋಸ್ತುತೇ || ಈ ಕೆಳಗಿನ ಮಂತ್ರವನ್ನು ಹೇಳುತ್ತ ಶಂಖದಲ್ಲಿ ಕಲಶದ ನೀರನ್ನು ತುಂಬಿಸಿ ಹೂವನ್ನು ಇಡಬೇಕು . *ಪಾಂಚಜನ್ಯಾಯ ವಿದ್ಮಹೇ ಪಾವಮಾನಾಯ ಧೀಮಹೀ ತನ್ನೋ ಶಂಖಃ ಪ್ರಚೋದಯಾತ್*

ನಂತರ ಶಂಖದ ನೀರನ್ನು ಪೂಜಾದ್ರವ್ಯಗಳ ಮೇಲೆ ತುಳಸೀ ಅಥವಾ ಹೂವಿನಿಂದ ಈ ಕೆಳಗಿನ ಮಂತ್ರವನ್ನು ಹೇಳುತ್ತ ಪ್ರೋಕ್ಷಿಸಬೇಕು.

*ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಪಿ ವಾ | ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ*

೬) *ಪೀಠಪೂಜೆ*

ವಿಷ್ಣೋರಾಸನ ಭೂತಾಯ ದಿವ್ಯರತ್ನಮಯಾಯ ಚ ಪ್ರಧಾನ ಪುರುಷೇಶಾಯ ಮಹಾಪೀಠಾಯತೇ ನಮಃ |

ದೇವರ ಪೀಠಕ್ಕೆ ತುಳಸಿಯನ್ನು ಹಾಕಿ ನಮಸ್ಕಾರ ಮಾಡುವುದು.

*ಷೋಡಶೋಪಚಾರ*

*ಧ್ಯಾನಮ್*

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ | ರಘುನಾಥಾಯ ನಾಥಾಯ ಸೀತಾಯಾ ಪತಯೇ ನಮಃ || (ನಿಮ್ಮ ಇಷ್ಟ ದೇವರ ಅಥವಾ ಪ್ರತಿಮೆಯ ಧ್ಯಾನವನ್ನು ಮಾಡುವುದು)

( ತುಳಸಿ / ಹೂವನ್ನು ಪ್ರತಿಮೆಗೆ ಅರ್ಪಿಸಬೇಕು . )

*ಆವಾಹನಮ್*

ಶ್ರೀ ಲಕ್ಷ್ಮೀನಾರಾಯಣಾಯ ನಮಃ ಆವಾಹಯಾಮಿ ಆವಾಹನಂ ಸಮರ್ಪಯಾಮಿ || ಎಂದು ತುಳಸಿ / ಹೂವನ್ನು ಪ್ರತಿಮೆಗೆ ಅರ್ಪಿಸಬೇಕು . (ಪುರುಷಸೂಕ್ತ ತಿಳಿದವರು ಪಠಿಸಬೇಕು)

*ಆಸನಮ್*

ಶ್ರೀ ಲಕ್ಷ್ಮಿನಾರಾಯಣಾಯ ನಮಃ ಆಸನಮ್ ಸಮರ್ಪಯಾಮಿ

*ಪಾದ್ಯಮ್*

ಶ್ರೀ ಲಕ್ಷ್ಮಿನಾರಾಯಣಾಯ ನಮಃ - : ಪಾದ್ಯಂ ಸಮರ್ಪಯಾಮಿ || [ ಕಲಶದ ನೀರು ಬಿಡುವುದು ]

*ಅರ್ಘ್ಯಮ್* :

ಶ್ರೀ ಲಕ್ಷ್ಮಿನಾರಾಯಣಾಯ ನಮಃ ಅರ್ಘ್ಯಂ ಸಮರ್ಪಯಾಮಿ || [ ಕಲಶದ ನೀರು ಬಿಡುವುದು ]

*ಆಚಮನೀಯಮ್*

- : ಶ್ರೀ ಲಕ್ಷ್ಮಿನಾರಾಯಣಾಯ ನಮ : ಆಚಮನೀಯಂ ಸಮರ್ಪಯಾಮಿ || ] ಕಲಶದ ನೀರು ಬಿಡುವುದು ]

*ಸ್ನಾನಮ್* - :

ಶ್ರೀ ಲಕ್ಷ್ಮಿನಾರಾಯಣಾಯ ನಮಃ ಸ್ನಾನಂ ಸಮರ್ಪಯಾಮಿ || [ ಹೂವಿನಿಂದ ಪ್ರತಿಮೆಗೆ ಕಲಶದ ನೀರನ್ನು ಪ್ರೋಕ್ಷಿಸುವುದು. (ಅಭಿಷೇಕದ ಮೂರ್ತಿ ಅಥವಾ ಸಾಲಿಗ್ರಾಮ ಇದ್ದರೆ ಶಂಖದಿಂದ ಅಭಿಷೇಕ ಮಾಡುವುದು)

*ವಸ್ತ್ರಮ್*

: ಶ್ರೀ ಲಕ್ಷ್ಮಿನಾರಾಯಣಾಯ ನಮ : ವಸ್ತ್ರಂ ಸಮರ್ಪಯಾಮಿ || (ವಸ್ತ್ರವನ್ನು ಅಥವ ತುಳಸಿ ಹಾಕುವುದು)

*ಉಪವೀತಂ*

- ಶ್ರೀ ಲಕ್ಷ್ಮಿನಾರಾಯಣಾಯ ನಮಃ ಯಜ್ಞೋಪವೀತಂ ಸಮರ್ಪಯಾಮಿ || [ ಯಜೋಪವೀತವನ್ನು ಅಥವ ತುಳಸಿ ಹಾಕುವುದು ] (ಆಭರಣಗಳಿದ್ದಲ್ಲಿ ಹಾಕಬಹುದು)

*ಗಂಧಮ್*

- : ಶ್ರೀ ಲಕ್ಷ್ಮೀನಾರಾಯಣಾಯ ನಮಃ ಗಂಧಂ ಸಮರ್ಪಯಾಮಿ || [ ಗಂಧವನ್ನು ಹಚ್ಚುವುದು ]

*ಪುಷ್ಪಾಣಿ*

: - ಶ್ರೀ ಲಕ್ಷ್ಮಿನಾರಾಯಣಾಯ ನಮಃ ಪುಷ್ಪಂ ಸಮರ್ಪಯಾಮಿ || [ ಪ್ರತಿಮೆಯನ್ನು ಹೂವುಗಳಿಂದ ಅಲಂಕರಿಸಬೇಕು ) |

ನಂತರ ಯಾವುದೇ ಸ್ತೋತ್ರ;ಅಷ್ಟೋತ್ತರ ಇದ್ದಲ್ಲಿ ಪಠಿಸಬೇಕು ಉದಾಹರಣೆಗೆ ವಿಷ್ಣು ಸಹಸ್ರನಾಮ ಇತ್ಯಾದಿ..

*ಧೂಪಂ*

ಶ್ರೀ ಲಕ್ಷ್ಮಿನಾರಾಯಣಾಯ ನಮಃ ಧೂಪಂ ಆಘ್ರಾಪಯಾಮಿ [ ಧೂಪವನ್ನು ಹಚ್ಚಿ ದೇವರಿಗೆ ತೋರಿಸಬೇಕು ]

*ದೀಪಃ*

ಶ್ರೀ ಲಕ್ಷ್ಮಿನಾರಾಯಣಾಯ ನಮ : ದೀಪಂ ದರ್ಶಯಾಮಿ || [ ಮೂರು ಬತ್ತಿಯ ದೀಪವನ್ನು [ ಏಕಾರತಿ ] ಹಚ್ಚಿ ದೇವರಿಗೆ ತೋರಿಸಿ ನಂದಿಸಬೇಕು ]

(ದೇವರಿಗೆ ಹಚ್ಚಿಟ್ಟ ದೀಪಗಳು ಸರಿಯಾಗಿದೆಯೇ ಎಂದು ಒಮ್ಮೆ ನೋಡಿ)

*ನೈವೇದ್ಯಮ್*

: - ಶುದ್ಧವಾದ ನೆಲದ ಮೇಲೆ ತಟ್ಟೆಯಲ್ಲಿ ಹಣ್ಣುಕಾಯಿ ಮನೆಯಲ್ಲಿ ಶುದ್ಧವಾಗಿ ತಯಾರಿಸಿದ ನೈವೇದ್ಯವನ್ನು ಇಟ್ಟು ತುಳಸಿ ನೀರಿನಿಂದ ಆ ನೈವೇದ್ಯವನ್ನು ಪ್ರೋಕ್ಷಿಸಿ , ತುಳಸಿಯನ್ನು ಅದರ ಮೇಲೆ ಹಾಕಿ , ಕೈಯಲ್ಲಿ ತುಳಸಿಯನ್ನು ಹಿಡಿದುಕೊಂಡು : - ಶ್ರೀ ಲಕ್ಷ್ಮಿನಾರಾಯಣಾಯ ನಮಃ ನೈವೇದ್ಯಂ ನಿವೇದಯಾಮಿ || ಎಂದು ದೇವರಿಗೆ ಅರ್ಪಿಸಬೇಕು. (ಪಂಚಮುದ್ರೆಯನ್ನು ತಿಳಿದವರು ಪ್ರದರ್ಶಿಸುವುದು)

ಅಭಿಷೇಕದ ತೀರ್ಥವನ್ನು ಆ ನೈವೇದ್ಯಗಳ ಮೇಲೆ ಹಾಕಬೇಕು

*ತಾಂಬೂಲಂ*

ಶ್ರೀಲಕ್ಷ್ಮಿನಾರಾಯಣಾಯ ನಮಃ ತಾಂಬೂಲಂ ಸಮರ್ಪಯಾಮಿ .

*ಮಂಗಲನೀರಾಜನಮ್*

: -ಶ್ರೀ ಲಕ್ಷ್ಮೀನಾರಾಯಣಾಯ ನಮಃ ಮಂಗಲನೀರಾಜನಮ್ ಸಮರ್ಪಯಾಮಿ || ದೇವರಿಗೆ ಮಂಗಳಾರತಿ ಬೆಳಗಬೇಕು.

*ಮಂತ್ರಪುಷ್ಪಾಂಜಲಿ*

ಶ್ರೀ ಲಕ್ಷ್ಮಿನಾರಾಯಣಾಯ ನಮಃ ಮಂತ್ರಪುಷ್ಪಾಂಜಲಿ ಸಮರ್ಪಯಾಮಿ ||

*ನಮಸ್ಕಾರ*

ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿ ಚ | ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಂ ಪದೇಪದೇ ||

ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃ | ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲ ||

ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ । ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನಃ ||

ನಮಸ್ಕಾರಂ ಸಮರ್ಪಯಾಮಿ.

*ಕಾಯೇನ ವಾಚಾ ಮನಸೇಂದ್ರಿಯೆರ್ವಾ ಬುದ್ಧಾತ್ಮನಾವಾ ಪ್ರಕೃತೇ ಸ್ವಭಾವಾತ್ ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ*

ಅನೇನ ಶ್ರೀ ಲಕ್ಷ್ಮಿನಾರಾಯಣ ಪೂಜಾರಾಧನೇನ ಭಗವಾನ್ ತತ್ಸತ್ ಶ್ರೀಹರಿಕೃಷ್ಣಾರ್ಪಣಮಸ್ತು ||

(ಇದನ್ನು ಸಂಕ್ಷೇಪವಾಗಿ ನೀಡಿದ್ದೇನೆ ವಿಸ್ತಾರವಾಗಿಯೂ ದೇವರ ಪೂಜೆ ಮಾಡಬಹುದು )

ಸಂಗ್ರಹ

ಪ್ರಶಾಂತ್ ಭಟ್ ಕೋಟೇಶ್ವರ

9886600332